ಒಲವಿನ ಹಕ್ಕಿ: ಗಿಳಿಯಂತೆ ತೋರುವ ಒಂದು ಬಗೆಯ ಹಕ್ಕಿ, ಸಾಧಾರಣವಾಗಿ ಆಫ್ರಿಕದ ಅಗಪೋರ್ನಿಸ್ ಜಾತಿಯವನ್ನು ಈ ಹೆಸರಿಂದ ಕರೆಯುತ್ತಾರೆ (ಲವ್ ಬರ್ಡ್). ಪ್ರಪಂಚದ ನಾನಾ ಭಾಗಗಳಲ್ಲಿ ಇವು ಹರಡಿವೆ. ಆಕಾರದಲ್ಲಿ ಚಿಕ್ಕದಾದರೂ ಉದ್ದ ಪುಕ್ಕಗಳಿಂದಾಗಿ ಹಕ್ಕಿ ದೊಡ್ಡದಾಗಿ ಕಾಣುತ್ತದೆ. ಗರಿ ಮೃದು ನೀಲಿ ಬಣ್ಣದ್ದಾಗಿದ್ದು ಮೇಲೆ ಹಸಿರು, ಕೆಂಪು ಮತ್ತು ಬಿಳಿ ಮಚ್ಚೆಗಳಿವೆಯಾಗಿ ಹಕ್ಕಿ ನೋಡಲು ಬಲು ಚೆನ್ನ. ಗಂಡು ಹೆಣ್ಣು ಹಕ್ಕಿಗಳು ಯಾವಾಗಲೂ ಜೊತೆ ಜೊತೆಯಾಗಿದ್ದು ಒಂದನ್ನೊಂದು ಹಿಂಬಾಲಿಸುತ್ತ, ಒಂದರ ಸಾಮೀಪ್ಯವನ್ನು ಮತ್ತೊಂದು ಬಯಸಿ, ಸದಾ ಸರಸ ಸಲ್ಲಾಪದಲ್ಲಿರುತ್ತವಾದ ಕಾರಣ ಇವನ್ನು ಒಲವಿನ ಹಕ್ಕಿಗಳು ಎಂದು ಕರೆದಿರಬೇಕು. ಇವನ್ನು ಹಿಡಿದು ಮಾರುವುದುಂಟು. ಕೊಂಡು ಸಾಕುವವರೂ ಇದ್ದಾರೆ. == ಉಲ್ಲೇಖಗಳು ==